ನವದೆಹಲಿ: ಹೆಸರು ಗಳಿಸಬೇಕು ಅಥವಾ ಬೇರೆ ಏನನ್ನೋ ಮಾಡಬೇಕೆಂಬ ಆಸೆಯಿಂದ ಪ್ರಾಣವನ್ನೇ ಪಣಕ್ಕಿಡಲೂ ಹಿಂಜರಿಯದ ನೂರಾರು ಮಂದಿ ಜಗತ್ತಿನಲ್ಲಿದ್ದಾರೆ. ಇದರಲ್ಲಿ ಕೆಲವರು ಯಶಸ್ವಿಯಾದರೆ ಮತ್ತೆ ಕೆಲವರು ನಿರಾಶೆ ಅನುಭವಿಸುತ್ತಾರೆ. ಆದರೆ ಸಾಧನೆ ಮಾಡಲು ಈ ವ್ಯಕ್ತಿ ಆಯ್ದುಕೊಂಡ ಮಾರ್ಗದ ಬಗ್ಗೆ ತಿಳಿದುಕೊಂಡೆರೆ ನಿಮಗೆ ಶಾಕ್ ಆಗುತ್ತದೆ. ಈತನ ಸಾಹಸಗಾದೆಯ ಬಗ್ಗೆ ತಿಳಿದರೆ ನಿಮಗೆ ನಿಜಕ್ಕೂ ಅಚ್ಚರಿಯ ಜೊತೆಗೆ ಆಶ್ಚರ್ಯವೂ ಆಗುತ್ತದೆ. ಹೆಸರು ಮಾಡಲು ಹಿಂಗೂ ಮಾಡಬಹುದಾ? ಅನ್ನೋ ಪ್ರಶ್ನೆ ಮೂಡುತ್ತದೆ. ಅಷ್ಟಕ್ಕೂ ಈತ ಮಾಡಿದ್ದಾದರೂ ಏನು ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ವಿಷಕಾರಿ ಹಾವುಗಳ ಜೊತೆಗೆ ಸರಸ!
ಟೆಕ್ಸಾಸ್‌ನಲ್ಲಿ ನೆಲೆಸಿರುವ ಜಾಕಿ ಬಿಬ್ಬಿ(Jackie Bibby) ಎಂಬಾತ 11 ಅತ್ಯಂತ ಅಪಾಯಕಾರಿ ವಿಷಕಾರಿ ರ್ಯಾಟಲ್ ಸ್ನೇಕ್‌ಗಳನ್ನು ಬಾಯಲ್ಲಿ ಒತ್ತಿಹಿಡಿದು ವಿಶ್ವದಾಖಲೆ ನಿರ್ಮಿಸಿರುವ ಪ್ರಕರಣ ಅಮೆರಿಕದಲ್ಲಿ ಬೆಳಕಿಗೆ ಬಂದಿದೆ. 2010ರಲ್ಲಿ ಈತ ಈ ಸಾಧನೆ ಮಾಡಿದ್ದ. ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಫೇಸ್‌ಬುಕ್ ಖಾತೆಯಲ್ಲಿ Throwback Thursday ಎಂದು ಈ ವಿಷಯವನ್ನು ಹಂಚಿಕೊಳ್ಳಲಾಗಿದೆ. ಇದು ತುಂಬಾ ಅಪಾಯಕಾರಿಯಾಗಿರುವುದರಿಂದ ಈಗ ಈ ವರ್ಗವನ್ನು ಗಿನ್ನಿಸ್ ವಿಶ್ವ ದಾಖಲೆಗಳಿಂದ ತೆಗೆದುಹಾಕಲಾಗಿದೆ. ಜಾಕಿ ಸೇರಿದಂತೆ ಹಲವರು ಈ ನಿರ್ಧಾರದಿಂದ ಆಶ್ಚರ್ಯಗೊಂಡಿದ್ದಾರೆ.
ಇದನ್ನೂ ಓದಿ: 11 ಬಾರಿ ಮದುವೆಯಾಗಿರುವ 52 ವರ್ಷದ ಮಹಿಳೆ 12ನೇ ಪತಿಗಾಗಿ ಸಿದ್ಧ..!
ಅಪಾಯಕಾರಿ ಸಾಹಸ ಪ್ರದರ್ಶನಕ್ಕೆ ಬ್ರೇಕ್!
ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್(Guinness World Records) ತನ್ನ ಫೇಸ್‌ಬುಕ್ ಪುಟದಲ್ಲಿ ಈ ದಾಖಲೆ ಹೊಂದಿರುವವರ ಫೋಟೋಗಳನ್ನು ಹಂಚಿಕೊಂಡಿದೆ. ಈ ಚಿತ್ರಗಳಲ್ಲಿ ಜಾಕಿ ತನ್ನ ಬಾಯಿಯಲ್ಲಿ 11 ಹಾವುಗಳನ್ನು ಹಾಕಿಕೊಂಡಿರುವುದನ್ನು ಕಾಣಬಹುದು. ಜಾಕಿ ಈ ಎಲ್ಲಾ ಹಾವುಗಳನ್ನು ಕೈಯಿಂದ ಹಿಡಿಯದೆ ಬಾಯಿಯ ಕೆಳಗೆ ಇಟ್ಟುಕೊಂಡಿದ್ದಾನೆ. ಈ ದಾಖಲೆ ಅತ್ಯಂತ ಅಪಾಯಕಾರಿಯಾಗಿತ್ತು. ಯಾವುದಾದರೂ ಹಾವು ಜಾಕಿಯನ್ನು ಕಚ್ಚಿದ್ದರೆ ಆಗ ಅತನ ಸಾವು ಖಚಿತವಾಗಿತ್ತು. ಇಂತಹ ಅಪಾಯಕಾರಿ ಸಾಹಸ ಪ್ರದರ್ಶಿಸಿದ ಬಳಿಕ ಇದೀಗ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ತನ್ನ ಪಟ್ಟಿಯಿಂದ ಇದನ್ನು ತೆಗೆದು ಹಾಕಿದೆ.
ಹಲವು ಬಾರಿ ಪ್ರಾಣವನ್ನೇ ಪಣಕ್ಕಿಟ್ಟಿದ್ದ ಜಾಕಿ
ಜಾಕಿ ಇಂತಹ ಅಪಾಯಕಾರಿ ಸಾಹಸಗಳನ್ನು ಹಲವು ಬಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಪಾಯಕಾರಿ ಸಾಹಸಕ್ಕೆ ಹೆಸರುವಾಸಿಯಾಗಿರುವ ಜಾಕಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರ ಅಸಂಖ್ಯಾತ ಅಭಿಮಾನಿಗಳು ಜಾಕಿಗೆ ‘ಖತರ್ನಾಕ್ ಕಿಲಾಡಿ’ ಅಂತಾ ಕರೆಯುತ್ತಾರೆ. ಇದಲ್ಲದೆ ಅನೇಕರು ಅವರನ್ನು ಸ್ನೇಕ್ ಮ್ಯಾನ್(Snake Man) ಎಂತಲೂ ಕರೆಯುತ್ತಾರೆ. ಇನ್ನು ಮುಂದೆ ಈ ರೀತಿಯ ದಾಖಲೆಗಳಿಗೆ ಬ್ರೇಕ್ ಹಾಕುವುದಾಗಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಸ್ಪಷ್ಟಪಡಿಸಿದೆ. ಮತ್ತೊಂದು ದಾಖಲೆ ಮಾಡಲು ಬೇರೆ ಯಾರೂ ಈ ಸಾಹಸ ಮಾಡದಿರಲಿ ಎಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಾಕಿ ತನ್ನ ಬಾಯಿಯಲ್ಲಿ ಹಾಕಿಕೊಂಡಿರುವ ಈ ರಾಟಲ್ ಸ್ನೇಕ್ ಗಳು ವಿಶ್ವದ ಅಪಾಯಕಾರಿ ಹಾವುಗಳ ಜಾತಿಗೆ ಸೇರಿವೆ. ಇದರ ವಿಷದ 1 ಹನಿ ಕೂಡ ವ್ಯಕ್ತಿಯ ಜೀವಕ್ಕೆ ಮಾರಣಾಂತಿಕ ಎಂದು ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: Omicron COVID Variant: ಕೇವಲ ಒಂದು ದಿನದಲ್ಲಿ ಯುಕೆಯಾದ್ಯಂತ 50% ಕ್ಕಿಂತ ಹೆಚ್ಚಿನ ಒಮಿಕ್ರಾನ್ ಕೋವಿಡ್ ಪ್ರಕರಣ
ಈ ಮೊದಲು ಜಾಕಿ ಅನೇಕ ವಿಷಕಾರಿ ಹಾವು(Rattle Snake)ಗಳೊಂದಿಗೆ ಸ್ನಾನದ ತೊಟ್ಟಿಯಲ್ಲಿ ಕುಳಿತುಕೊಂಡು ಸಾಹಸ ಪ್ರದರ್ಶಿಸಿದ್ದರು. ಜಾಕಿ ತನ್ನ ವಿಚಿತ್ರ ಸಾಹಸಗಳಿಂದ ಈ ವರ್ಷ ಅಮೆರಿಕದ ಪ್ರಸಿದ್ಧ ಟಿವಿ ಶೋಗಳಲ್ಲಿ ಮಿಂಚಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.